🍅 2026ರಲ್ಲಿ ಹೆಚ್ಚು ಲಾಭ ಕೊಡೋ ಟೊಮೇಟೊ ಬೆಳೆ ಸಂಪೂರ್ಣ ಮಾಹಿತಿ
🍅 2026ರಲ್ಲಿ ಹೆಚ್ಚು ಲಾಭ ಕೊಡೋ ಟೊಮೇಟೊ ಬೆಳೆ ಸಂಪೂರ್ಣ ಮಾಹಿತಿ Raitha Info Center 23 🍅 2026ರಲ್ಲಿ ಹೆಚ್ಚು ಲಾಭ ಕೊಡೋ ಟೊಮೇಟೊ ಬೆಳೆ ಸಂಪೂರ್ಣ ಮಾಹಿತಿ ಟೊಮೇಟೊ ಒಂದು ಪ್ರಮುಖ ತರಕಾರಿ ಬೆಳೆ ಆಗಿದ್ದು, ವರ್ಷಪೂರ್ತಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಬೆಳೆ. ಸರಿಯಾದ ಯೋಜನೆ, ಉತ್ತಮ ಬೀಜ ಆಯ್ಕೆ ಮತ್ತು ಸಮರ್ಪಕ ನಿರ್ವಹಣೆ ಮಾಡಿದರೆ ಟೊಮೇಟೊ ಬೆಳೆ ಮೂಲಕ ರೈತರು ಉತ್ತಮ ಲಾಭ ಪಡೆಯಬಹುದು. ಈ ಲೇಖನದಲ್ಲಿ ಟೊಮೇಟೊ ಬೆಳೆ ಮಾಡುವ ವಿಧಾನ, ವೆಚ್ಚ, ಗೊಬ್ಬರ, ರೋಗ ನಿಯಂತ್ರಣ ಮತ್ತು ಲಾಭದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. 🌱 ಟೊಮೇಟೊ ಬೆಳೆ ಹಾಕುವ ಸೂಕ್ತ ಸಮಯ👇 • ಖರೀಫ್ ಕಾಲ: ಜೂನ್–ಜುಲೈ. • ರಬಿ ಕಾಲ: ಅಕ್ಟೋಬರ್–ನವೆಂಬರ್. •ಬೇಸಿಗೆ ಬೆಳೆ: ಜನವರಿ–ಫೆಬ್ರವರಿ. •ಮಿತವಾದ ತಾಪಮಾನ (18°C–30°C) ಟೊಮೇಟೊ ಬೆಳೆಗೆ ಸೂಕ್ತವಾಗಿದೆ. 🌾 ಮಣ್ಣು ಮತ್ತು ಜಮೀನು ತಯಾರಿ👇 • ಉತ್ತಮ ಡ್ರೈನೇಜ್ ಇರುವ ಮಣ್ಣು ಅಗತ್ಯ • ಕೆಂಪು ಮಣ್ಣು ಅಥವಾ ಮರಳು ಮಿಶ್ರಿತ ಲೋಮ ಮಣ್ಣು ಉತ್ತಮ • ಮಣ್ಣಿನ pH 6.0–7.5 ಇದ್ದರೆ ಉತ್ತಮ ಬೆಳವಣಿಗೆ • ಜಮೀನು ಆಳವಾಗಿ ಒಗೆದು, ಗೊಬ್ಬರ ಮಿಶ್ರಣ ಮಾಡಿ ಬೆಡ್ ತಯಾರಿಸಬೇಕು. 🌿 ಬೀಜ ಆಯ್ಕೆ ಮತ್ತು ನರ್ಸರಿ ತಯಾರಿ👇 • ಉತ್ತಮ ಗುಣಮಟ್ಟದ ಹೈಬ್ರಿಡ್ ಬೀಜ ಬಳಸುವುದು ಉತ್ತಮ • ಒಂದು ಏಕರಿಗೆ ಸುಮಾರು 80–100 ಗ್ರಾಂ ಬೀಜ ಸಾಕು • ಮೊದಲು ನರ್ಸರಿ ತಯಾರಿಸಿ 25–30 ದಿನದ ನಂತರ ನೆಡ...