PM Kisan Samman Nidhi - ರೈತರಿಗೆ ₹6000 ಹೇಗೆ ಪಡೆಯಬೇಕು
ರೈತರಿಗೆ ಸರ್ಕಾರದ ಅನುದಾನ - ಸಂಪೂರ್ಣ ಮಾಹಿತಿ
PM Kisan ಯೋಜನೆ ಎಂದರೇನು?
PM Kisan Samman Nidhi ಎಂಬುದು ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆ. ಈ ಯೋಜನೆಯಡಿ ದೇಶದ ರೈತರಿಗೆ ಪ್ರತಿ ವರ್ಷ ₹6,000 ನೀಡಲಾಗುತ್ತದೆ. ಈ ಹಣವನ್ನು 3 ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಎಷ್ಟು ಹಣ ಸಿಗುತ್ತದೆ?
ಪ್ರತಿ 4 ತಿಂಗಳಿಗೊಮ್ಮೆ ₹2,000 ಬರುತ್ತದೆ
ವರ್ಷಕ್ಕೆ ಒಟ್ಟು 3 ಕಂತು = ₹6,000
ಹಣ ನೇರವಾಗಿ DBT ಮೂಲಕ ಬ್ಯಾಂಕ್ ಖಾತೆಗೆ ಬರುತ್ತದೆ
ಯಾರು ಅರ್ಜಿ ಹಾಕಬಹುದು?
ಭಾರತದ ಯಾವುದೇ ರಾಜ್ಯದ ರೈತರು
ಸ್ವಂತ ಜಮೀನು ಇರಬೇಕು (ಗೇಣಿ ರೈತರಿಗೆ ಅನ್ವಯಿಸುವುದಿಲ್ಲ)
Aadhar card ಮತ್ತು ಬ್ಯಾಂಕ್ ಖಾತೆ ಹೊಂದಿರಬೇಕು
ತೆರಿಗೆ ಪಾವತಿದಾರರು ಅರ್ಹರಲ್ಲ
ನೋಂದಣಿ ಹೇಗೆ ಮಾಡಬೇಕು?
pmkisan.gov.in ವೆಬ್‌ಸೈಟ್‌ಗೆ ಹೋಗಿ
'New Farmer Registration' ಕ್ಲಿಕ್ ಮಾಡಿ
Aadhar number ಹಾಕಿ OTP verify ಮಾಡಿ
ಹೆಸರು, ಜಮೀನಿನ ವಿವರ, ಬ್ಯಾಂಕ್ ಖಾತೆ ಮಾಹಿತಿ ತುಂಬಿ
Submit ಮಾಡಿ - ಅಥವಾ ನಿಮ್ಮ ಹತ್ತಿರದ CSC ಕೇಂದ್ರಕ್ಕೆ ಹೋಗಿ
ಹಣ ಬಂದಿದೆಯಾ ಎಂದು ತಿಳಿಯುವುದು ಹೇಗೆ?
pmkisan.gov.in ನಲ್ಲಿ 'Beneficiary Status' check ಮಾಡಿ
Aadhar number ಅಥವಾ ಮೊಬೈಲ್ ನಂಬರ್ ಹಾಕಿ
PM Kisan mobile app ಡೌನ್‌ಲೋಡ್ ಮಾಡಿ status ನೋಡಿ
ಅವಶ್ಯಕ ದಾಖಲೆಗಳು
Aadhar Card
ಜಮೀನಿನ ಪಹಣಿ (RTC)
ಬ್ಯಾಂಕ್ Passbook
ಮೊಬೈಲ್ ನಂಬರ್
ಗಮನಿಸಿ: ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ CSC ಕೇಂದ್ರದಲ್ಲಿ ಉಚಿತ ಸಹಾಯ ಪಡೆಯಬಹುದು. Helpline: 155261

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ